ಹೊಡಿರೆಲೇ ಹಲಗಿ ಕನ್ನಡ | ಸಾಂಗ್ ಲಿರಿಕ್ಸ್ | Hodirale Halagi | Song Lyrics | Garadi | Darshan
ಕನ್ನಡ - ಗರಡಿ ಚಿತ್ರದಲ್ಲಿ ಹೊಡಿರೆಲೇ ಹಲಗಿ ಕನ್ನಡ ಸಾಹಿತ್ಯ
Hodirale halagi | song lyrics | in kannada | garadi | darshan
ಹೊಡಿರೆಲೇ ಹಲಗಿ
ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ
ತೆಗಿರಲೇ ನೆಟಗೆ
ಬಲಗೈಯ್ಯಾಗ ದೊಡ್ಡಕಡ್ಡಿ
ಯಡಗೈಯ್ಯಾಗ ಶಣ್ಣ ಕಡ್ಡಿ
ನಡು ಬಟ್ಟೇಲಿ ಚರ್ಮ ವಾದ್ಯ
ಬರ್ರ್ಯೆಲೇ ಗಂಗ್ಯಾ, ಬುದ್ಯಾ ನಿಂಗ್ಯಾ
ಹೊಡಿರೆಲೇ ಹಲಗಿ
ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ
ತೆಗಿರಲೇ ನೆಟಗೆ...
ಒಂತೊಟ್ಟು ಎಣ್ಣಿನ ಒಳಘಾಕು
ನಿಂದಷ್ಟು ಫೀಲಿಂಗು ಹೊರಘಾಕು
ಗೆದ್ದಾಗ ತೊಡಿ ತಟ್ಟಿ ಕುಣಿಬಾಕು
ಪ್ರಶಸ್ತಿ ಎದೆ ತಟ್ಟಿ ಹಿಡಿಬಾಕು
ಕಡಮಿ ಕುಡಿದರು ಕುಡುಕ ಅಂತಾರ
ಹೆಚ್ಚಿಗೆ ಹೀರಲೇ ಮಗನ
ಅಮಲುಗಣ್ಣಲೆ ಸೀದ ನೋಡಲೇ
ಹ್ಯಾಂಗೆ ಕುಣಿತಾವು ಜಘನಾ
ನಿಮ್ಮ ಮೀಸಿಗೆ ನನ್ನ ಗಲ್ಲ
ಟಚಿಂಗ್ ಆದರ ಹಲ್ಲಾ ಗುಲ್ಲಾ
ನೀವು ಸಿಕ್ಕಿದ್ದ ನಮ್ಮ ಸೌಭಾಗ್ಯ
ಬರ್ರ್ಯೆಲೇ ರಂಗ್ಯಾ ಪರ್ಮ್ಯಾ ರಾಗ್ಯಾ
ಹೊಡಿರೆಲೇ ಹಲಗಿ
ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ
ತೆಗಿರಲೇ ನೆಟಗೆ
ಎತ್ತೆತ್ತಿ ಬಾಟ್ಲಿನ ಕೆಳಗಿಟ್ಟು
ತಿಳ್ಕಳ್ರಿಗಾಗಿ ಒಳಗುಟ್ಟು
ಎಣ್ಣಿಗು ಹೆಣ್ಣಿಗೂ ರೆಸ್ಪೆಕ್ಟು
ಕೊಟ್ರನ ಗಂಡ್ಸುರು ಪರ್ಫೆಕ್ಟು...
ಪೋಲಿಯಾಗದ ಪ್ಯಾಲಿ ಜೀವನ
ಫಾಯದೆ ಇಲ್ಲಲೇ ಮಗನ
ದೀಡ ತಾಸಿನ ಮಟ್ಟಿಗೆ ನನ್ನ
ಆಗ್ತೀಯೇನಲೇ ಲಗನಾ
ಗ್ರೀನ್ ಸಿಗ್ನಲ್ ಮಂಜೂರಾತಿ
ನಾನ್ ಕೊಟ್ಮ್ಯಾಲೆ ಇನ್ನೇನೈತಿ
ಪಡ್ಕೊ ಬರಲೇ ಸುಖ ಸೌಲಭ್ಯ
ಬರ್ರ್ಯೇಲೇ ಬಸ್ಯಾ ಸುಕ್ಯಾ ನಾಗ್ಯಾ
ಹೊಡಿರೆಲೇ ಹಲಗಿ
ಹೊಡಿರೆಲೇ ಹಲಗಿ
ನಾ ನಿಮ್ ಕಡೆ ಹುಡುಗಿ
ತೆಗಿರಲೇ ನೆಟಗೆ....
ಗರಡಿ ಚಿತ್ರದ ಇತರ ಹಾಡುಗಳು :
Song | Hodirele Halagi |
Movie | Garadi |
Singers | Meghana Halyal |
Music Director | V.Harikrishna |
Lyrics | Yogaraj Bhat |
Star Cast | Yashas Surya, Sonal Montero |
Audio Label/Credit | DARSHAN GARADI SONGS LYRICS |
No comments:
Post a Comment